ದಿಕ್ಕುಗಳು

ದಿಕ್ಕುಗಳು ನಾಲ್ಕು
  1. ಉತ್ತರ
  2. ದಕ್ಷಿಣ
  3. ಪೂರ್ವ
  4. ಪಶ್ಚಿಮ
ಉತ್ತರ ಹಾಗೂ ದಕ್ಷಿಣ ದಿಕ್ಕು ಭೂಮಿಯ ಉತ್ತರ ದ್ರುವ ಹಾಗೂ ದಕ್ಷಿಣ ದ್ರುವ ವನ್ನು ತೋರಿಸುತ್ತದೆ.


ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ದಿಕ್ಕಿನಲ್ಲಿ ತಿರುಗುತ್ತದೆ. ಪೂರ್ವ ಹಾಗು ಪಶ್ಚಿಮ ವನ್ನು ಗುರುತಿಸುವ ಇನ್ನೊಂದು ಸುಲಭ ವಿಧಾನವೆಂದರೆ ಸೂರ್ಯ ಉದಯಿಸುವ ದಿಕ್ಕು ಪೂರ್ವವಾದರೆ ಸೂರ್ಯ ಅಸ್ತಮಿಸುವ ದಿಕ್ಕು ಪಶ್ಚಿಮ ಆಗಿರುತ್ತದೆ.


ಈ ಮೇಲಿನ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕು ಗಳೆಂದು ಕರೆಯುತ್ತಾರೆ. ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಇವು ಅಂತರ್ ದಿಕ್ಕು ಗಳಾಗಿವೆ.


ದಿಕ್ಕುಗಳನ್ನು ಕಂಡು ಹಿಡಿಯುವ ಸಾಧನವನ್ನು ಕಂಪಾಸ್ ಎಂದು ಕರೆಯುತ್ತಾರೆ. ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ಅಥವಾ ಚುಂಬಕದಂತೆ ವರ್ತಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್  ಮೇಲಿನ ದಿಕ್ಕುಗಳ ಗುರುತನ್ನ ಕೆಳಗಿನ ಚಿತ್ರದಲ್ಲಿ ಕಾಣ ಬಹುದು.



ಹಿಂದೂ ಧರ್ಮದ ಪ್ರಕಾರ ದಿಕ್ಕುಗಳು 10 ಈ ಪ್ರತಿಯೊಂದುು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ. ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವ ಈಶನ, ದಕ್ಷಿಣ-ಪೂರ್ವ ಅಗ್ನಿ, ಉತ್ತರ ಪಶ್ಚಿಮ ವಾಯು, ದಕ್ಷಿಣ-ಪಶ್ಚಿಮ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕ ವಿಷ್ಣು. ಅಂತರ್ ದಿಕ್ಕುಗಳ ಹೆಸರು ದಿಕ್ಪಾಲಕರ ಹೆಸರಿನಿಂದ ಕರೆಯಲಾಗುತ್ತದೆ. 4 ದಿಕ್ಕುಗಳು ಹಾಗೂ 4 ಅಂತರ್ ದಿಕ್ಕುಗಳನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಈ ಪುಟವನ್ನು ವಿಸ್ಮಯಪುರಿಯ ಜಾಲತಾಣಕ್ಕೆ ಸ್ಥಳಾಂತರ ಗೊಳಿಸಲಾಗುತ್ತಿದೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ತಿಳಿಸಿ.

ಪ್ರಚಲಿತ ಪೋಸ್ಟ್‌ಗಳು