ಭಾಗಗಳು - ಕಾಲು, ಅರ್ಧ, ಮುಕ್ಕಾಲು ಹಾಗೂ ಪೂರ್ಣ
ಒಂದು ವಸ್ತುವನ್ನು ಎರಡು ಸಮ ಭಾಗ ಮಾಡಿದರೆ ಎರಡು ಅರ್ಧ ಭಾಗ ಆಗುತ್ತದೆ.
ಒಂದು ವಸ್ತುವನ್ನು ನಾಲ್ಕು ಸಮ ಭಾಗ ಮಾಡಿದರೆ ನಾಲ್ಕು ಕಾಲು ಭಾಗ ಆಗುತ್ತದೆ.
ಒಂದು ವಸ್ತುವಿನಿಂದ ಕಾಲು ಭಾಗ ತೆಗೆದರೆ ಮುಕ್ಕಾಲು ಭಾಗ ಉಳಿಯುತ್ತದೆ.
ಒಂದು ವಸ್ತುವನ್ನು 4 ಸಮನಾದ ಭಾಗ ಮಾಡಿ ಅದರಲ್ಲಿ ಒಂದು ಭಾಗ ಕಾಲು ಭಾಗ, ಎರಡು ಭಾಗ ಅರ್ಧ ಭಾಗ, ಮುರು ಭಾಗ ಮುಕ್ಕಾಲು ಭಾಗ ಹಾಗೂ ನಾಲ್ಕು ಭಾಗ ಪೂರ್ಣ ಭಾಗ ಆಗುತ್ತದೆ.
ಕಾಲು ಭಾಗ - 1/4
ಅರ್ಧ ಭಾಗ - 2/4 = 1/2
ಮುಕ್ಕಾಲು ಭಾಗ - 3/4
ಪೂರ್ಣ ಭಾಗ - 4/4 = 1
ಮೇಲೆ ಒಂದು ಆಯತಾಕಾರದ ಭಾಗ ಮಾಡುವದನ್ನು ನೋಡಿದಿರಿ. ಈಗ ವೃತ್ತವನ್ನು ಅಂದರೆ ಸರ್ಕಲ್ ಭಾಗ ಮಾಡಿ ನೋಡೋಣ.
ಉದಾಹರಣೆಗೆ ಅಮ್ಮ ದೋಸೆಗಳನ್ನು ಮನೆಯವರಿಗೆಲ್ಲ ಬಡಿಸುತ್ತಿದ್ದಾಳೆ. ಒಬ್ಬ ಕಾಲು, ಇನ್ನೊಬ್ಬ ಅರ್ಧ, ಮತ್ತೊಬ್ಬ ಮುಕ್ಕಾಲು ಮತ್ತು ಪೂರ್ತಿ ದೋಸೆ ಕೇಳಿದರೆ ಈ ಮುಂದಿರುವ ಹಾಗೆ ಭಾಗ ಮಾಡಿ ಕೊಡಬೇಕು. ಗುಲಾಬಿ ಬಣ್ಣ ದೋಸೆ ಚೂರು ಎಂದು ಭಾವಿಸಿ.
Helpful
ಪ್ರತ್ಯುತ್ತರಅಳಿಸಿ