ಚಿನ್ನದ ಮೊಟ್ಟೆ ಕೊಡುವ ಕೋಳಿ ಕತೆ


ಒಂದು ಊರಿನಲ್ಲಿ ಒಬ್ಬ ಬಡವನಿದ್ದ. ಆತ ಒಮ್ಮೆ ಸಂತೆಗೆ ಹೋದಾಗ ಕೋಳಿಯೊಂದನ್ನು ಖರೀದಿಸಿ ತಂದ. ಮರುದಿನ ಬೆಳಿಗ್ಗೆ ಕೋಳಿ ಗುಡಿಗೆ ಹೋದ ಆತನಿಗೆ ಆಶ್ಚರ್ಯ ಕಾದಿತ್ತು! ಆ ಕೋಳಿ ಚಿನ್ನದ ಮೊಟ್ಟೆಯೊಂದನ್ನು ಇಟ್ಟಿತ್ತು ಅದು ಫಳ ಫಳ ಎಂದು ಹೊಳೆಯುತ್ತಿತ್ತು! ಅದನ್ನು ಎತ್ತಿ ಮುಟ್ಟಿ ನೋಡಿದ. ಸಂಶಯವೇ ಇಲ್ಲ. ಅದು ಅಪ್ಪಟ ಚಿನ್ನದ ಮೊಟ್ಟೆ ಆಗಿತ್ತು. ಹೀಗೆ ಪ್ರತಿದಿನ ಒಂದೊಂದು ಚಿನ್ನದ ಮೊಟ್ಟೆ ಕೋಳಿ ಇಡುತ್ತಾ ಇತ್ತು.

 ಅವುಗಳನ್ನು ಮಾರಿ ಆ ಬಡವ ಆಗರ್ಭ ಶ್ರೀಮಂತನಾದ. ಹೀಗೆ ಶ್ರೀಮಂತಿಕೆಯ ಜೀವನ ಸಾಗಿಸುತ್ತಿದ್ದಾಗ ಆತನಲ್ಲಿ ದುರಾಸೆ ಹುಟ್ಟಿಕೊಂಡಿತ್ತು. ದಿನ ಈ ಕೋಳಿ ನನಗೆ ಬರೀ ಒಂದೇ ಮೊಟ್ಟೆ ಕೊಡುತ್ತಿದೆ. ಅದರ ಹೊಟ್ಟೆಯಲ್ಲಿ ನೂರಾರು ಮೊಟ್ಟೆ ಇರಬೇಕು. ಎಲ್ಲವನ್ನೂ ಒಮ್ಮೆಗೇ ಪಡೆದುಕೊಳ್ಳೋಣ ಎಂದು ಅದರ ಹೊಟ್ಟೆಯನ್ನು ಕತ್ತಿಯಿಂದ ಕೊಯ್ದು. ಹೊಟ್ಟೆಯಲ್ಲಿ ಯಾವುದೇ ಚಿನ್ನದ ಮೊಟ್ಟೆ ಇರಲಿಲ್ಲ.

 ಆ ಕೋಳಿ ಸತ್ತೋಯ್ತು. ಮುಂದೆ ಆತನ ಅತಿ ಆಸೆಯಿಂದಾಗಿ ಪ್ರತಿ ದಿನ ಸಿಗುತ್ತದ್ದ ಚಿನ್ನದ ಮೊಟ್ಟೆ ಕೂಡ ಸಹ  ಸಿಗದಂತಾಯ್ತು.

ನೀತಿ: ಅತಿ ಆಸೆ ಗತಿ ಕೇಡು. 

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು