ಬಾನ ದಾರಿಯಲ್ಲಿ ಜಾರಿ ಸೂರ್ಯ ಹೋದ

ಚಿಕ್ಕ ಮಗುವಿಗೆ ಲಾಲಿ ಹಾಡು ಹಾಡಿ ಮಲಗಿಸುವ ಸಂತೋಷ ಇದೆಯಲ್ಲ ಅದನ್ನು ಮರೆಯಲು ಅಸಾಧ್ಯ.  

ಅಪ್ಪ ಅಮ್ಮನ ಪಕ್ಕದಲ್ಲಿ ಕಥೆ ಕೇಳುತ್ತಾ ಲಾಲಿ ಹಾಡು ಕೇಳುತ್ತಾ ನಿದ್ರಾ ಲೋಕಕ್ಕೆ ಕನಸಿನ ಲೋಕಕ್ಕೆ ಜಾರಿ ಹೋಗುವ ಮಗುವಿನ ಖುಷಿಗೆ ಪಾರವೇ ಇಲ್ಲ .
ಭಾಗ್ಯವಂತ ಚಿತ್ರದ ಚಿ ಉದಯಶಂಕರ್ ಅವರ ಸಂಗೀತ ಈ ಸಂಗೀತವನ್ನು ಕೇಳಿಯೇ ಆನಂದಿಸಬೇಕು. 
ನೀವು ಕೇಳಿ ನಿಮ್ಮ ಮಗುವಿಗೂ ಕೇಳಿಸಿ .


ಬಾನ ದಾರಿಯಲ್ಲಿ ಜಾರಿ ಸೂರ್ಯ ಹೋದ

ಬಾನ ದಾರಿಯಲ್ಲಿ
ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು
ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ

ನೀನಾಡೊ ಮಾತೆಲ್ಲ ಜೇನಿನಂತೆ
ನಗುವಾಗ ಮೊಗವೊಂದು ಹೂವಿನಂತೆ || ನೀನಾಡೊ ಮಾತೆಲ್ಲ ||
ನೀನೊಂದು ಸಕ್ಕರೆಯ ಬೊಂಬೆಯಂತೆ
ಮಗುವೆ ನೀ ನನ್ನ ಪ್ರಾಣದಂತೆ
ನನ್ನ ಪ್ರಾಣದಂತೆ || ಬಾನ ದಾರಿಯಲ್ಲಿ ||

ಆ ದೇವ ನಮಗಾಗಿ ತಂದ ಸಿರಿಯೆ
ಈ ಮನೆಯ ಸೌಭಾಗ್ಯ ನಿನ್ನ ನಗೆಯೆ || ಆ ದೇವ ನಮಗಾಗಿ ||ಅಳಲೇನು ಚಂದ ನನ್ನ ಪುಟ್ಟ ದೊರೆಯೆ
ಹಾಯಾಗಿ ಮಲಗು
ನನ್ನ ಜಾಣ ಮರಿಯೆ ನನ್ನ ಜಾಣ ಮರಿಯೆ || ಬಾನ ದಾರಿಯಲ್ಲಿ ||


ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು